azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

anuradha sriram feat. udit narayan - ahah e bedurugombey (from "gaalipata") lyrics

Loading...

ಚಿತ್ರ: ಗಾಳಿಪಟ
ಹಾಡಿದವರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ನಟರು: ಗಣೇಶ್, ಡೈಸಿ ಬೋಪಣ್ಣ, ದಿಗಂತ್, ನೀತು ಮತ್ತು ಇತರರು
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು, ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೆ
ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ



Random Lyrics

HOT LYRICS

Loading...