azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

dr . rajkumar & bangalore latha - heluvudu ondu lyrics

Loading...

verse
ಹೇಳುವುದು ಒಂದು, ಮಾಡುವುದು ಇನ್ನೊಂದು
ಹೇಳುವುದು ಒಂದು, ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು, ಮಾಡುವುದು ಇನ್ನೊಂದು
ಹೇಳುವುದು ಒಂದು, ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು, ಮಾಡುವುದು ಇನ್ನೊಂದು
bridge
ಪಮಪ ದದಪಾ ಪಮಪ ದದಪಾ
ಪಮಪ ದದಪಾ, ಪಮಪ ದದಪಾ ಮಗರಿಸರಿ
verse
ನಿದನಿ ಸರಿಸ ನಿದನಿ ಸರಿಸ
ನಿದನಿ ಸರಿಸ ನಿದನಿ ಸರಿಸ ಮಗರಿಸರಿ
ರೀ
ಏನ್ರೀ
ಸಾವಿರ ಸುಳ್ಳನು ಹೇಳಿ ಮಾದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು
ಮನೆಯಲ್ಲೇ ಇರುವೆನು ಎಂದ
ಅವರು ಏನು ಮಾಡಿದರು
ಏನ್ ಮಾಡಿದರು
ಗುಲಗಂಜಿಗೆ ಕಣ್ಣಾ ಕಪ್ಪು
ಕಾಣದೆಂದು ಹೇಳುವರು
ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
ನಿಜವನ್ನೇ ಹೇಳಿ ಜಗಕೆ ಯಾರು ಸುಖವ ಹೊಂದಿದರು
ಹಾಗ
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
ಶ್ರೀಮತಿಯ ಪ್ರಶ್ನಿಸಲೆಂದೇ ಸಂಗೀತ ಕಲಿತಿದ್ದೇನು
ಕೈಹಿಡಿವ ಮುಂಚೆ ನುಡಿದ ಮಾತು ಮರೆತುಹೋಯ್ತೇನು
ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು
ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು
ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
ಹೇಳುವುದು ಒಂದು, ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
ಹೇಳುವುದು ಒಂದು
ಮಾಡುವುದು ಇನ್ನೊಂದು



Random Lyrics

HOT LYRICS

Loading...