azlyrics.biz
a b c d e f g h i j k l m n o p q r s t u v w x y z 0 1 2 3 4 5 6 7 8 9 #

dr. rajkumar - baduke hasiru lyrics

Loading...

ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಕೇಸರಂತ ದ್ವೇಷ ಇರುವಾಗ

ಬದುಕೇ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ

ಗೃಹಿಣಿಯೇ ಲಕ್ಷ್ಮಿಯು ಮನೆಯೇ ಮಂದಿರ
ಶಾಂತಿಯೇ ಆ ಮನೆಗೆ ಹುಣ್ಣಿಮೆ ಚಂದಿರ

ಇನಿಯನ ಹರಿವುದೇ ಸತಿಯ ಧರ್ಮ
ಹೃದಯ ಗೆಲುವುದೇ ಸುಖದ ಮರ್ಮ
ಸ್ನೇಹದಿ ಕಲೆತು ಬೆರೆತಾಗ
ಜೊತೆಯಲಿ ಸೇರಿ ನಡೆದಾಗ

ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ

ಸತಿಪತಿ ಸಂಸಾರದ ಕಣ್ಣುಗಳನಂತೆ
ಬದುಕಿನ ಬಂಡಿಗೆ ಗಾಲಿಗಳಂತೆ

ಪ್ರೇಮದ ಮಾತುಗಳೇ ಕೆನೆಹಾಲಂತೆ
ನಗುವೆ ಮಲ್ಲಿಗೆಯ ಹೂಗಳಂತೆ
ತಿಂಗಳ ಬೆಳಕು ದಿನವೆಲ್ಲ
ಈ ನಿಜವನ್ನು ಅರಿತಾಗ

ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಕೇಸರಂತ ದ್ವೇಷ ಇರುವಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ಬದುಕೇ ಹಸಿರು ಪ್ರೀತಿ ಬೆರೆತಾಗ
ಪ್ರೀತಿ ಬೆರೆತಾಗ
ಪ್ರೀತಿ ಬೆರೆತಾಗ



Random Lyrics

HOT LYRICS

Loading...